ದಿನಾಂಕ:- 28-08-2013,ಶನಿವಾರ ಸುಮಾರು 12:30 ಕ್ಕೆ ಶ್ರೀಮತಿ ಹೊಂಬೆಗೌಡ ಸಂಯುಕ್ತ ಕಾಲೇಜಿನಲ್ಲಿ 2 ನೇ GULG meeting ನಡೆಯಿತು.ಸುಮಾರು 12:20 ಕ್ಕೆ ರಮೀಸ್,ಕಾರ್ತಿಕ್ ಬಟ್ಟ್,ಜೀವ,ಕರ್ತಿಕ್,ಮಣಿ ಅವರೆಲ್ಲ ಕಾಲೇಜಿಗೆ ಬಂದರು.ಅದಕ್ಕೂ ಮುನ್ನವೇ ಅವರೆಲ್ಲ ಎಸ್.ಎಸ್.ಎಮ್.ಆರ್.ವಿ. ಕಾಲೇಜಿನಲ್ಲಿ ಒಂದು ತರಗತಿಯನ್ನು ಮುಗಿಸಿಕೊಂಡು ಹೊಂಬೆಗೌಡ ಕಾಲೇಜಿಗೆ ಬಂದರು.ಆಗ ಅಲ್ಲಿ ದ್ವಿತೀಯ ಪಿ.ಯು.ಸಿ ಯ arts,science,commerce ನ ಎಲ್ಲ ವಿದ್ಯಾರ್ಥಿಗಳು ಒಟ್ಟುಗೂಡಿದರು.ಸುಮಾರು 12:45 ಕ್ಕೆ ತರಗತಿ ಪ್ರಾರಂಭವಾಯಿತು.ಪ್ರಾರಂಭದಲ್ಲಿ ಕಾರ್ತಿಕ್ ಬಟ್ಟ್ ರವರು ಶುರು ಮಾಡಿದರು.ನಂತರ ರಮೀಸ್ ರವರು ಪ್ರೆಸೆಂಟೆಶನ್ ಮೂಲಕ ವಿದ್ಯಾರ್ಥಿಗಳಿಗೆ ಕೆಲವೊಂದು ವಿಷಯಗಳನ್ನು ತಿಳಿಸಿದರು.ನಂತರ ಅಲ್ಲಿದ್ದ ಎಲ್ಲ ವಾಲೆಂಟಿಯರನ್ನು ಅಂದರೆ ದಿವ್ಯ,ರುಹಿತ,ಅರವಿಂದ್ ರವರನ್ನು ಎಲ್ಲರಿಗು ಪರಿಚಯಿಸಿದರು.ನಂತರ ಅಲ್ಲಿ ಸ್ವಲ್ಪ ಕಂಪ್ಯೂಟರ್ ತೊಂದರೆಯಾಗಿದ್ದ ಕಾರಣ ಅವರು ಹಾಗೇ ತರಗತಿಯನ್ನು ಮುಂದುವರೆಸಿದರು.ನಂತರ ಸ್ವಲ್ಪ ಸಮಯದ ನಂತರ ಕಂಪ್ಯೂಟರ್ ಸರಿ ಹೋಯಿತು.ಮತ್ತು ಮಣಿ ಅವರು ನಮಗೆ ತಿಳಿದ ‘animation’ಬಗ್ಗೆ ತಕ್ಕ ಮಟ್ಟಿಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.ನಂತರ ಸಮಯ ಆಗುತ್ತ ಆಗುತ್ತ ವಿದ್ಯಾರ್ಥಿಗಳು ಗಲಾಟೆ ಮಾಡಲು ಶುರು ಮಾಡಿದರು.ಆಗ ರಮೀಸ್ ಪರವಾಗಿಲ್ಲ ಆಸಕ್ತಿ ಇರುವ ವಿದ್ಯಾರ್ಥಿಗಳು ಮಾತ್ರ ಇನ್ನು ಕೇವಲ ೧೦ ನಿಮಿಷ ಇರುವಂತೆ ಹೇಳಿದರು.ಕೆಲವು ವಿದ್ಯಾರ್ಥಿಗಳು ಮನೆಗೆ ಹೋದರು ಇನ್ನು ಕೆಲವರು ಅಲ್ಲೇ ಉಳಿದುಕೊಂಡರು.ಆ ಸಮಯದಲ್ಲಿ ರಮೀಸ್ ಅವರು ವಿದ್ಯಾರ್ಥಿಗಳಿಗೆ ಎಫ್ ಎಸ್ ಎಮ್ ಕೆ ಮತ್ತು ವಾಲೆಂಟಿಯರ್ ಬಗ್ಗೆ ಹೇಳಿದರು ಹಾಗೂ ಅದರಿಂದ ಯಾರಿಗೆಲ್ಲ ಉಪಯೋಗವೆಂದು ಹೇಳಿದರು ಮತ್ತು ಅಲ್ಲಿದ್ದ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ನೊಂದಾಣಿ ಮಾಡಿಕೊಂಡರು.ನಂತರ ಸುಮಾರು 1:53 ಕ್ಕೆ ಎಲ್ಲ ವಿದ್ಯಾರ್ಥಿಗಳು ಮನೆಗೆ ತೆರಳಿದರು.ನಾವು ಮನೆಗೆ ಹೋಗುವಾಗ ಹೊಂಬೆಗೌಡ ಕಾಲೇಜಿನ ಪ್ರಾಂಶುಪಾಲರಿಗೂ FSMKಬಗ್ಗೆ ಮತ್ತು community centerಬಗ್ಗೆ ಹೇಳಿದರು.ನಂತರ FSMKಪರವಾಗಿ ಹೊಂಬೆಗೌಡ ಕಾಲೇಜಿಗೆ ‘free software movement of karnataka’ಬಗ್ಗೆ ಇರುವ 2 ಪುಸ್ತಕಗಳನ್ನು ನೀಡಿದರು.ನಂತರ ನಾವೆಲ್ಲ ಅಂದರೆ ರಮೀಸ್,ಕಾರ್ತಿಕ್ ಬಟ್ಟ್,ಜೀವ,ಮಣಿ,ಕಾರ್ತಿಕ್,ದಿವ್ಯ,ರುಹಿತ,ಅರವಿಂದ್ ಹಾಗೂ ಇನ್ನು ಹಲವು ಕಾಲೇಜು ವಿದ್ಯಾರ್ಥಿಗಳು ನಮ್ಮ ಜೊತೆ ಅಮಿಗೊ ಕಮ್ಯೂನಿಟಿ ಸೆಂಟರಿಗೆ ಬಂದರು.ಅಲ್ಲಿ ಸ್ವಲ್ಪ ಹೊತ್ತು ಕಾಲೇಜು ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡು ವಿದ್ಯಾರ್ಥಿಗಳು ಮನೆಗೆ ಹೋದರು.ಹಾಗೇ ಒಬ್ಬೊಬ್ಬರೆ ಮನೆಗೆ ತೆರಳಿದರು.ನಂತರ ಎಂದಿನಂತೆ ಸಯಾಂಕಾಲ 5:30 ಕ್ಕೆ ತರಗತಿ ನಡೆಯಿತು.

2013-09-21 12.54.56

2013-09-21 12.54.45

ಧನ್ಯವಾದಗಳು,

 

-ಅರವಿಂದ್.