೧. ಫ್ರೀ ಬೇಸಿಕ್(free basic) ಎನ್ನುವುದು ಇಂಟರ್ನೆಟ್.ಆರ್ಗ್ (internet.org) ನ ಮತ್ತೊಂದು ಹೆಸರು.

೨.’ಅಂತರ್ಜಾಲ ತಾಟಸ್ಥ್ಯ’(net neutrality) ನಿಯಮಗಳನ್ನು ಫ್ರೀ ಬೇಸಿಕ್ ಉಲ್ಲಂಘಿಸುತ್ತದೆ.(ಅಂತರ್ಜಾಲವು ಎಲ್ಲಾ ಗ್ರಾಹಕರಿಗೆ ಹಾಗೂ ಜಾಲತಾಣಗಳಿಗೆ ಮುಕ್ತ ಮತ್ತು ಸಮಾನ ವಾಗಿರಬೇಕು. )

೩. ಫ್ರೀ ಬೇಸಿಕ್ ಅಂತರ್ಜಾಲವನ್ನು ಸಣ್ಣ ಸಣ್ಣ ಭಾಗಗಳಾಗಿ ಬೇರ್ಪಡಿಸುತ್ತದೆ, ಆದ್ದರಿಂದ ಅಂತರ್ಜಾಲವು ಮತ್ತೆಂದಿಗೂ ಅಂತರ್ಜಾಲವಾಗಿ ಉಳಿಯುವುದಿಲ್ಲ.

೪. ಫೇಸ್ ಬುಕ್, ಗೂಗಲ್ ಮತ್ತು ಇತರ ಸಂಸ್ಥೆಗಳು ಬೆಳೆದದ್ದು ಈ ಮುಕ್ತ ಅಂತರ್ಜಾಲದಿಂದಲೇ. ಈಗ ಫೇಸ್ ಬುಕ್ ಅಂತರ್ಜಾಲದ ಮೇಲೆ ಏಕಸ್ವಾಮ್ಯತೆ ಸಾದಿಸಲು ಹೊರಟಿದೆ.

೫. ದೊಡ್ಡ ಸಂಸ್ಥೆ ಗಳ ಏಕಸ್ವಾಮ್ಯತೆ ಸಾಧಿಸುವುದು ಮತ್ತು ಅಂತರ್ಜಾಲ ವಿಭಜಿಸುವುದರಿಂದ ಇದೀಗ ತಾನೇ ಬೆಳೆಯುತ್ತಿರುವ ಸಂಸ್ಥೆಗಳ ಏಳಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

೬. ದೂರ ಸಂಪರ್ಕ ಸೇವಾ ಪೂರೈಕೆದಾರರು ಫ್ರೀ ಬೇಸಿಕ್ ನ ವೆಚ್ಚವನ್ನು ಹೊರಬೇಕಾಗುತ್ತದೆ. ದೂರ ಸಂಪರ್ಕ ಸೇವಾ ಪೂರೈಕೆದಾರರು ಈ ವೆಚ್ಚವನ್ನು ತಮ್ಮ ಇತರೆ ಗ್ರಾಹಕರಿಂದ ಭರಿಸಬೇಕಾಗುತ್ತದೆ.

೭. ಫ್ರೀ ಬೇಸಿಕ್ ಮುಕ್ತ ವೇದಿಕೆಯಾಗಿರುವುದಿಲ್ಲ, ಫೇಸ್ ಬುಕ್ ಎಲ್ಲವನ್ನೂ ನಿಯಂತ್ರಿಸುವ ಅಧಿಕಾರವನ್ನು ಹೊಂದಿರುತ್ತದೆ.

೮. ಗ್ರಾಹಕರು ಬಳಸಿದ ಮಾಹಿತಿ ಹಾಗೂ ವಿಷಯವನ್ನು ಫೇಸ್ ಬುಕ್ ಕಂಪನಿಯು ಕಲೆಹಾಕುವ / ಬಳಸುವ ಅವಕಾಶವನ್ನು ಹೊಂದಿರುತ್ತದೆ.

೯. ಫೇಸ್ ಬುಕ್ ನ ಜಾಹೀರಾತು ಜನರ ದಾರಿತಪ್ಪಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ http://fsmi.in or http://savetheinternet.in  ಮಾಹಿತಿ ಜಾಲಥಾಣಕ್ಕೆ ಭೇಟಿನೀಡಿರಿ, ಮತ್ತು ಫ್ರೀ ಬೇಸಿಕ್ ಅನ್ನು ವಿರೋಧಿಸಿ ಭಾರತೀಯ ದೂರ ಸಂಪರ್ಕ ನಿಯಂತ್ರಕ ಸಂಸ್ಥೆ (ಟ್ರಾಯ್/ TRAI) ಗೆ ಮಿಂಚಂಚೆ ಯನ್ನು ಬರೆಯಿರಿ. ಫ್ರೀ ಬೇಸಿಕ್ ನ್ನು ಧಿಕ್ಕರಿಸಿ.