ದಿನಾಂಕ :- 27-07-2013 (ಶನಿವಾರ) ಅರ್ಷಿಯ,ದಿವ್ಯ,ಕವಿತ,ಸುಜಯ್,ಕರ್ತಿಕ್,ಸಾಯ್ ಕಿರಣ್,ಅರವಿಂದ್….ನಾವೆಲ್ಲ ಸೇರಿ ಅಮಿಗೊ ಕಮ್ಯೂನಿಟಿ ಸೆಂಟರ್ ನಿಂದ ಮೆಜೆಸ್ಟಿಕ್ ರೈಲ್ವೆ ನಿಲ್ಡಾಣಕ್ಕೆ ಸುಮಾರು ೨ ಗಂಟೆಗೆ ತಲುಪಿದೆವು.ರೈಲ್ವೆ ನಿಲ್ಡಾನಕ್ಕೆ ಹೋಗುವಾಗ ಕಾರ್ತಿಕ್ ಮತ್ತು ಅರವಿಂದ್ ಬಸ್ಸಿನಿಂದ ಇಳಿದು ನಡ್ಕೊಂಡೆ ರೈಲ್ವೆ ನಿಲ್ಡಾನಕ್ಕೆ ಹೋದರು.(ಕಾರಣ:-ಆ ಸಮಯ ಟ್ರಾಫಿಕ್ ಜಾಮ್ ಇತ್ತು)

ರೈಲ್ವೆ ನಿಲ್ಡಾಣದಲ್ಲಿ ರೈಲು ಸಿಗಲಿಲ್ಲ….ಸುಜಯ್ ನಮಗೆಲ್ಲ ಟಿಕೇಟ್ ತಂದನು.ಬಿಡ್ಥೀ ಹೋಗುವ ರೈಲನ್ನು ಹತ್ತುವ ಬದಲಾಗಿ ಮಂಡ್ಯ ಎಕ್ಸ್ ಪ್ರೆಸ್ಸ್ ರೈಲನ್ನು ಹತ್ತಿದೆವು..ನಮಗೆ ಹತ್ತಿದ ರೈಲನ್ನು ಇಳಿಯ ಬೇಕಾದ ಸಂದರ್ಭ. ಆ ಸಂದರ್ಭದಲ್ಲಿ ಎಲ್ಲ ವಾಲಂಟಿಯರ್ಸ್ ರೈಲಿನಿಂದ ಇಳಿದರು ಆದರೆ ಅರ್ಷಿಯ ಮಾತ್ತ್ರ ರೈಲು ಓಡುತಿರುವ ಸಂದರ್ಭದಲ್ಲಿ ಭಯದಿಂದ ಇಳಿದರು.ಮರಳಿ ನಾವು ಬಿಡದಿ ರೈಲನ್ನು ಸುಮಾರು ೩ ಗಂಟೆಗೆ ಪ್ಲಾಟ್ ಪಾರಮ್ ನಂಬರ್ ೯ ರಲ್ಲಿ ರೈಲನ್ನು ಹತ್ತಿ ದ್ದೆವು…ಸುಮಾರು ೧ ಗಂಟೆಗಳ ಕಾಲ ರೈಲಿನಲ್ಲಿ ಇದ್ದೆವು….ಆಗ ಕಾರ್ತಿಕ್,ಸಾಯ್ ಕಿರಣ್ ರೈಲಿನಿಂದ ಇಳಿದು ಹೋರಗೆ ಹೋದರು ಆಗ ದಿವ್ಯ ರಮೀಸ್ ಅವರಿಗೆ ಕರೆ ಮಾಡಿ ದೂರು ಮಾದಿದರು ಮತ್ತು ಜೀವ ಅವರು ಸಹ ನಮ್ಮೆಲ್ಲರ ಜೊತೆ ಮತನಾಡಿದರು….ನಂತರ ಕಾರ್ತಿಕ್ ಪಾಪ್ ಕಾರ್ನ್ ತಂದರು….ಸುಜಯ್ ೨ ಪ್ಯಾಕೆಟ್ ಬಾರಿಸಿದ….ಅವನು ಉಪವಾಸದಲ್ಲಿದ್ದ ಅರ್ಷಿಯ ಅವರನ್ನು ರೇಗಿಸುತ್ತ್ತಾ ತಿನ್ನುತ್ತಿದ್ದ ….ರೈಲಿನಲ್ಲಿ ಜನರು ಹೆಚ್ಚಾಗಿ ಇದ್ದರು…ದಿವ್ಯ ರಮೀಸ್ ಅವರಿಗೆ ಕರೆ ಮಾಡಿ ಮಾತಾಡುತಿದ್ದರು….ನಂತರ ಜೀವ ಅವರು ಕರೆ ಮಾಡಿ ನಮ್ಮ ಎಲ್ಲರ ತ್ತಿರ ಮಾತನಾಡುತಿದ್ದರು…..ದಿವ್ಯ ಅವರು ರಮೀಸ್ ಅವರಿಗೆ ಕರ್ತಿಕ್,ಕಿರಣ್ ಮಡಿದ ತಪ್ಪುಗಳನ್ನು ಹೇಳುತ್ತಿದ್ದರು ,ಅದಕ್ಕೆ ಕರ್ತಿಕ್,ಕಿರಣ್ ನಿಂತಿದ್ದ ರೈಲಿನಿಂದ ಇಳಿದು ಹೊರಗೆ ಓಡಿ ಹೋದರು….ಸ್ವಲ್ಪ ಸಮಯದ ನಂತರ ಅವರು ಬಂದರು…ನಂತರ ಸರಿಯಾಗಿ ೪ ಗಂಟೆಗೆ ರೈಲು ಹೊರಡಿತು…ರೈಲಿನಲ್ಲಿ ಕರ್ತಿಕ್,ಕಿರಣ್ ಅವರವರ ಮೊಬೈಲುಗಳಲ್ಲಿ ಹಾಡು ಕೇಳುತ್ತಿದ್ದರು..ಅಷಿಯ ಅವರ ಮೊಬೈಲ್ ನಲ್ಲಿ ಅರವಿಂದ್,ಕವಿತ,ದಿವ್ಯ,ಅರ್ಷಿಯ ಸೇರಿ ಹಿಂದಿ ಹಾದುಗಳನ್ನು ಕೇಳುತ್ತಿದ್ದರು…..ಸುಜಯ್ ಮಾತ್ರ ನಮ್ಮ ಪಕ್ಕದಲ್ಲಿದ್ದ ಯಾರೋ ಬ್ಯಾಂಕ್ ಆಫೀಸರ್ ಜೊತೆ ಮಾತನಾಡುತ್ತಿದ್ದ….ಹಾಗೆ ನಮ್ಮ ರೈಲಿನ ಪಯಣ ಬಹಳ ಮಾತುಕಥೆಗಳಿಂದ ಹೋದವು….ನಂತರ ನಾವು ಸುಮಾರು 5:30 ಕ್ಕೆ ರೈಲ್ವೆ ನಿಲ್ಡಾನದಲ್ಲಿ ಬಂದೆವು..ನಂತರ ನಾವು ಅಲ್ಲಿದ್ದ ನಮ್ಮವರಿಗೆ ಆಚರ್ಯ ನೀಡಲು ಅವರಿಗೆ ತಿಳಿಸದೆನೆ ನಾವೇ ಅಲ್ಲಿಗೆ ಹೋದ್ದೆವು…ಆದರೆ ರಮೀಸ್ ಅವರು ನಮ್ಮನ್ನು ಹುಡುಕಿಕೊಂಡು ರೈಲ್ವೆ ನಿಲ್ಡ್ನಾನಕ್ಕೆ ಹೋದರು…ಅದೇ ಸಮಯಕ್ಕೆ ನಾವು J.V.I.Tಬಂದೆವು…ಅಲ್ಲಿ ತಲುಪುವಷ್ಟರಲ್ಲಿ ಸುಮಾರು 6 ಗಂಟೆ ಆಗಿತ್ತು….ಆಗ ತುಂತುರು ಮಳೆ ಹನಿ ಬೀಳುತಿತ್ತು..ಅದೇ ಸಮಯಕ್ಕೆ ಅಲ್ಲಿದ್ದ ಇಂಜಿನಿಯರ್ ವಿದ್ಯಾರ್ಥಿಗಳು ಯಾವುದೋ ಕಂಡುಹಿಡಿಯುವ ಆಟವನ್ನು ಆಡುತ್ತಿದ್ದರು…ನಾವು ನೇರವಾಗಿ ಜೀವ ಅವರ ಬಳಿ ಹೋದೆವು.ಅಲ್ಲಿ ಅವರು ಇಂಜಿನಿಯರ್ ವಿದ್ಯಾರ್ಥಿಗಳಿಗೆ ಸಂಭಂದಿಸಿದ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರು…ಅವರನ್ನು ನೋಡಿದ ಬಳಿಕ ನಾವು ಸೆಮಿನಾರ್ ಹಾಲಿಗೆ ಹೋದೆವು ಅಲ್ಲಿ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮೊಬೈಲ್ ನಲ್ಲಿ ಉಡ್ಬೆಂಟು ಹೇಗೆ ಉಪಯೋಗಿಸುವುದು ಎನ್ನುವ ಬಗ್ಗೆ ತರಗತಿ ನದೆಯುತ್ತಿತ್ತು..ನಾವು ಸ್ವಲ್ಪ ಹೋತ್ತು ಅಲ್ಲಿ ಇದ್ದು ನಂತರ ಜೀವ ಬಳಿ ಬಂದ್ದೆವು ಮತ್ತು ನಮ್ಮ ಜೊತೆ ರಮೀಸ್ ಅವರು ಬಂದರು.(ಆ ಸಮಯಕ್ಕೆ ಅಲ್ಲಿ ಕರೆಂಟ್ ಇರಲಿಲ್ಲ ಎಲ್ಲರು ನೋಡಲು ದೆವ್ವ ಹಾಗೆ ಕಾಣುತಿದ್ದರು) ರಮೀಸ್ ಅವರು ನಮ್ಮನ್ನು ನಾಳೆ ಅಂದರೆ ಬಾನುವಾರ 28-07-2013 ರಂದು ಸುಮಾರು 30 ನಿಮಿಷಗಳ ಕಾಲ FSMKಬಗ್ಗೆ ತರಗತಿ ತೆಗೆದುಕೊಳ್ಳಲು ತಿಳಿಸಿದರು.ನಂತರ ಎಲ್ಲರು ಹೋದರು ಅರ್ಷಿಯ ಅವರು ಉಪವಾಸ ಇದ್ದ ಕಾರಣ ಅವರಿಗೆ ಆಗ ತಿನ್ನಲು ಜೀವ ಅವರು ಹೋಗಿ ಬ್ರೆ ಡ್ ಮತ್ತು ಹಣ್ಣುಗಳನ್ನು ತಂದು ಕೊಟ್ಟರು..ನಂತರ ಸುಮಾರು 8:45 ಕ್ಕೆ ನಾವು ಹುಡುಗರ ವಸತಿ ಗೃಹಕ್ಕೆ ಹೋದೆವು. ಹುಡುಗರ ವಸತಿ ಗೃಹದಲ್ಲಿ:- ಆಗ ಅಲ್ಲಿ ಹರಿಪ್ರಸದ್ ಅವರಿಗೆ ಹುಟ್ಟು ಹಬ್ಬದ ಸಲುವಾಗಿ ಅವರಿಗೆ ವಿದ್ಯಾಥಿಗಳ ಪ್ರಕಾರ ಉಡುಗೊರೆ ಕೊಟ್ಟರು.ಅಲ್ಲಿ 9 ಗಂಟೆಗೆ ಊಟ ಮುಗಿಸಿ(ಅನ್ನ,ಸಂಬಾರ್,ಅಪ್ಪಳ) ಅವರವರ ರೂಮಿಗೆ ಹೋದೆವು..ರೂಮಿನಲ್ಲಿ ಕರ್ತಿಕ್,ಅರವಿಂದ್,ಕಿರಣ್,ಸುಜಯ್ ಇದ್ದೆವು…ನಂತರ ವಿಘ್ನೆಷ್,ರಘುರಾಮ್ ಬಂದು ನಮ್ಮ ಜೊತೆ ಮಾತನಾಡುತ್ತಿದ್ದರು.ಆಗ ಹರಿಪ್ರಸದ್ ಬಂದರು ಅವರ ಜೊತೆಯಲ್ಲು ಮಾತನಾಡುತ್ತಿದ್ದರು..ನಂತರ ಅವರು ಹೋದ ಬಳಿಕ ಮಂಜುನಾಥ್ ಮತ್ತು ಧರ್ಮೆದ್ರ ಅವರು ಬಂದರು…ಅವರ ಜೊತೆ ಜೊತೆ ಹರಿಪ್ರಸದ್ ಲ್ಯಾಪ್ಟಾಪ್ ನಲ್ಲಿ “ಡ್ರಾಮ” ಚಲನಚಿತ್ರವನ್ನು ಸುಮಾರು 1:15 ತನಕ ನೋಡುತ್ತಿದ್ದೇವು…..ಸುಜಯ್ ಮಾತ್ರ ಸುಮಾರು ಬೆಳಿಗ್ಗೆ 3 ಗಂಟೆಗಳ ಕಾಲ “vice city” ಗೇಮ್ ಅಡುತ್ತಿದ್ದನು……

ಬಾನುವಾರ:-ಸುಮಾರು 6:25 ಗೆ ಜೀವ ಅವರು ನಮ್ಮ ರೂಮಿಗೆ ಬಂದು ನಮ್ಮನ್ನು ಎಚ್ಚರಗೋಳಿಸಿದರು.ಆಗ ಅರವಿಂದ್,ಸುಜಯ್ ಮಾತ್ರ ಎಚ್ಚರಗೊಂಡರು..ಕಿರಣ್ ಮತ್ತು ಕರ್ತಿಕ್ ಮಲಗೇ ಇದ್ದರು.ಜೀವ ಅವರು ಕಿರಣ್ ಮತ್ತು ಕಾರ್ತಿಕ್ ಅವರನ್ನು ಗಡಿಬಿದಿಯಿಂದ ಎಚ್ಚರಗೊಳಿಸಿದರು.ನಂತರ ನಾವೆಲ್ಲ ಜೀವ ಅವರ ಜೊತೆ ಆಟವಾಡಲು ಮೈದಾನಕ್ಕೆ ಹೋದೆವು..ಅಲ್ಲಿ ರಘು ರಾಮ್,ಶಿಜಿಲ್,ಮತ್ತು ಇನ್ನು 3 ಜನ ಇಂಜಿನಿಯರ್ ವಿದ್ಯಾರ್ಥಿಗಳು ಇದ್ದರು….ಅವರ ಜೊತೆ ನಾವು ಬ್ಯಾಸ್ಕೆಟ್ ಬಾಲ್ ಆಟ ಆಡುತ್ತಿದ್ದೆವು….ಅದು ಸುಮಾರು 45 ನಿಮಿಷಗಳ ಕಾಲ ಆಟವಾದಿದ್ದೇವು…ನಂತರ ಜೀವ,ಕಾರ್ತಿಕ್,ಅರವಿಂದ್,ಕಿರಣ್,ಸುಜಯ್ ಮರಳಿ ರೂಮಿಗೆ ಹೋದೆವು..ಅಲ್ಲಿ ನಾವು READYಆಗಲು ನಮಗೆ ಏನು ಇರಲಿಲ್ಲ ಅದಿಕ್ಕೆ ಸುಜಯ್ ದಿವ್ಯ ಅವರನ್ನು ಸೋಪ್,ತೂತ್ ಪೇಸ್ಟ್ ತರಲು ಹೇಳಿದ..ಅಷ್ಟರಲ್ಲಿ ಜೀವ ಅವರು ತೂತ್ ಪೇಸ್ಟ್ ತಂದು ಕೊಟ್ಟರು ಮತ್ತು ಮಂಜುನಾಥ್ ಅವರು ಸೋಪ್ ತಂದು ಕೊಟ್ಟರು…ಸುಮಾರು 8 ಗಂಟೆಗೆ ನಾವೆಲ್ಲ READYಆದೆವು…ನಂತರ ತಿಂಡಿ ತಿನ್ನಲು ಕ್ಯಾಂಟಿನಿಗೆ ಹೋಗಿ ಉಪ್ಪಿಟ್ ತಿಂದು ನಂತರ ಸೆಮಿನಾರ್ ಹಾಲಿಗೆ ಹೋದೆವು…ದಿವ್ಯ,ಅರ್ಷಿಯ,ಸುಜಯ್,ಕವಿತ ಅವರು ಸರ್. ಜೈಕುಮಾರ್ ಮತ್ತು ಸರ್.ರಮೀಸ್ ಅವರ ಜೊತೆ ಮಾತನಡುತ್ತಿದ್ದರು….ಅಲ್ಲಿ ಸ್ವಲ್ಪ ಹೋತ್ತು ನಾವು ಫೋಟೊ ತೆಗೆದುಕೊಂಡು ಇದ್ದೆವು…ನಂತರ ದಿವ್ಯ,ಅರ್ಷಿಯ,ಕವಿತ,ಸುಜಯ್ ಸೆಮಿನಾರ್ ಹಾಳಿಗೆ ಹೋದರು…ಕಾರ್ತಿಕ್,ಕಿರಣ್,ಅರವಿಂದ್ ಮಾತ್ರ ಅಲ್ಲೇ ಇರಲು ಬೆಜಾರ್ ಆಗಿ ಅಲ್ಲಿಂದ ಹೊರಗೆ ಹೋದರು….ಹೋರಗೆ ಹೋದವರು ಅಲ್ಲಿ ನಡೆಯುತ್ತಿದ್ದ ಕ್ರಿಕೇಟ್ ಆಟವನ್ನು ನೋಡುತ್ತಿದ್ದರು…ನಂತರ ಅಲ್ಲಿಯೆ ಹಲವಾರು ಫೋಟೊಗಳನ್ನು ತೆಗೆದುಕೊಂಡು ಇದ್ದರು.ಸ್ವಲ್ಪ ಸಮಯದ ನಂತರ ಕಾರ್ತಿಕ್,ಕಿರಣ್,ಅರವಿಂದ್ ಸೆಮಿನಾರ್ ಹಾಳಿಗೆ ಹೋದರು.ಅಲ್ಲಿ ದಿವ್ಯ,ಅರ್ಷಿಯ ಅವರು ಇಂಜಿನಿಯ ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಅವರವರ ಹೆಸರಿಗೆ ಸರಿಯಾಗಿ ಜೋಡಿಸುತ್ತಿದ್ದರು.ಸುಜಯ್ ಮತ್ತು ಕವಿತ C++ ಪ್ರೊಗ್ರಮ್ ಕಲಿಯುತ್ತಿದ್ದರು.ನಂತರ ಕಾರ್ತಿಕ್ ಮತ್ತು ಕಿರಣ್ ಪ್ರಮಾಣ ಪತ್ರವನ್ನು ಜೋಡಿಸುವುದರಲ್ಲಿ ತೊಡಗಿದರು..ಸುಜಯ್ ಹಾಡುಗಳನ್ನು ಕೇಳುತಿದ್ದ,ಅರವಿಂದ್ ಕವಿತ ಬಳಿ ತಕ್ಕ ಮಟ್ಟಿಗೆ C ಪ್ರೊಗ್ರಮ್ ಕಲಿಯುತಿದ್ದ…ಸ್ವಲ್ಪ ಸಮಯದ ನಂತರ ಎಲ್ಲಾರು ಒಟ್ಟುಗೂಡಿ ನಮ್ಮ ನಮ್ಮಲ್ಲಿಯೇ ಮಾತನಾಡುತ್ತಿದ್ದೆವು , ಆಗ ಅಲ್ಲಿ ಇಂಜಿನಿಯ ಕೆಲವು ವಿದ್ಯಾರ್ಥಿಗಳು ಹಾಡುಗಳನ್ನು ಪುನರಾವರ್ತನೆ ಮಾಡುತ್ತಿದ್ದರು,ಅದರಲ್ಲೂ ಒಂದು ವಿದ್ಯಾರ್ಥಿನಿ ‘ಸಂಜು ಮತ್ತು ಗೀತಾ’ ಎಂಬ ಹಾಡನ್ನು ಬಹಳ ರಾಗದಿಂದ ಹಾಡುತ್ತಿದ್ದರು ಅದನ್ನು ನಾವೆಲ್ಲ ಮೈಮರೆತು ಕೇಳುತ್ತಿದೇವು!!!!!!!ನಂತರ ಸುಮಾರು 2:15 ಗೆ ನಾವೆಲ್ಲ ಊಟಕ್ಕೆ ಹೋದೆವು……(ಊಟ:-ಪಲವ್,ಪಯಸಂ,)…….ಊಟ ಬಹಳ ರುಚಿಕರವಾಗಿ ಇತ್ತು…ಊಟದ ನಂತರ ಕಿರಣ್ ರೂಮಿಗೆ ಹೋಗಿ ಮಲಗೋನ ಎಂದು ಹೇಳಿದ ಆದರೆ ಕಾರ್ತಿಕ್ “ಬೇಡ ನಾವು ಮತ್ತೆ ಸೆಮಿನಾರ್ ಹಾಳಿಗೆ ಹೋಗೋನ “ಎಂದು ಹೇಳಿ ನಮ್ಮ ಬಳಿ ಇದ್ದ ಬ್ಯಾಗನ್ನು ರೂಮಿನಲ್ಲಿ ಇಟ್ಟು ನಾವೆಲ್ಲ ಸೆಮಿನಾರ್ ಹಾಳಿಗೆ ಹೋದೆವು….ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಸಮಯ 3:10 ಆಗಿತ್ತು..ಆಗ ಅಲ್ಲಿ ಇಂಜಿನಿಯ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ನಡೆಯುತ್ತಿತ್ತು……ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಬೆಗಳನ್ನು ಹಾಡಿನ ಮೂಲಕ ಹಾಡಿದರು,ಕೆಲವು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮತ್ತು ಕೆಲವು ಮುತ್ತಿನ ಮಾತುಗಳನ್ನು ಹೋರ ಚಿಮ್ಮಿದರು….ನಂತರ ರಮೀಸ್ ಅವರು ದಿವ್ಯ ಮತ್ತು ಅರ್ಷಿಯ ಅವರನ್ನು ಸಭಾಂಗನದಲ್ಲಿ FSMKಯ ಬಗ್ಗೆ ಮಾತನಾಡಲು ಕರೆದದು,ಆದರೆ ಅವರು ಯಾವುದೇ ತರಹದ ತಯಾರಾಗಿರಲ್ಲಿಲ್ಲ ಆದ ಕಾರಣ ಅವರು ತುಂಬ ಭಯ ಪಟ್ಟರು,ನಂತರ ರಮೀಸ್ ಎಲ್ಲರನ್ನು ಕರೆದರು,ಸಭಾಂಗನದ ಮೇಲೆ ಮೊದಲು ದಿವ್ಯ ಅವರು ಹೋಗಿ FSMK ಮತ್ತು ಅವರ ಬಗ್ಗೆ 1:40 ಸೆಕೆಂಡುಗಳ ಕಾಲ ಮಾತನಾಡಿ ಬಂದರು,ನಂತರ ಅರ್ಷಿಯ ಅವರೌ ಹೋಗಿ ತಮ್ಮ ಹೆಸರನ್ನು ಮಾತ್ರ ಹೇಳಿ ಬಂದರು,ಆಮೇಲೆ ಸುಜಯ್ ತಾನಾಗಿಯೆ ಹೋಗಿ ತನ್ನನ್ನು ಪರಿಚಯಿಸಿಕೊಂಡು ಬಂದನು,ನಂತರ ಮಣಿ ಅವರು (ಕಾಲಿನ ನ್ಯೂನ್ಯತೆಗೆ ಹೊಳಗಾಗಿರುವವರು) ಬಂದು ಮಾತನಾಡಿದರು ಆನಂತರ ಮಂಜುನಾಥ್ ಮತ್ತು ಧರ್ಮೆದ್ರರವರು ಮಾತನಾಡಿದರು ನಂತರ ಜೀವ ಅವರು ಯಾವುದೇ ಭಯವಿಲ್ಲದೆ FSMK ಮತ್ತು ಅವರ ಬಗ್ಗೆ ಪರಿಚಯಿಸಿದರು,ಆನಂತರ ರಮೀಸ್ ಅವರು ನಮ್ಮೆಲ್ಲರನ್ನು ಸಭಾಂಗನದ ಮೇಲೆ ಕರೆದು ನಮ್ಮನ್ನು ಪರಿಚಯಿಸಿದರು ಆಗ ಎಲ್ಲ ಇಂಜಿನಿಯರ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಮಗೆಲ್ಲ ಗೌರವ ಕೊಟ್ಟು ಎದ್ದು ನಿಂತು ಚಪ್ಪಾಲೆ ಹೋಡೆದರು…ನಂತರ ನಾವು ಸಭಾಂಗನದಿಂದ ಹೋರಗೆ ಬಂದೆವು…ಆಗ ಎಡಗಡೆ ದಿವ್ಯ ನೀರು ಕುಡಿಯುತ್ತಿದ್ದರು ಆಗ ಅವರ ಕೈಗಳು ಗಡ ಗಡ ಗಡ ಗಡ ಗಡ ಗಡ ಗಡ ಗಡನೇ ನಡುಗುತ್ತಿತ್ತು…..ಅರ್ಷಿಯ ಅವರು ನಿಂತಲ್ಲೆ ನಡುಗುತ್ತಿದ್ದರು…ಅವರಿಬ್ಬರನ್ನು ನೋಡಿ ಕಾರ್ತಿಕ್,ಅರವಿಂದ್,ಕಿರಣ್ ನಗುತ್ತಿದ್ದರು,ಆದರೆ ಬಲಗಡೆ ರಮೀಸ್ ಅವರು ಕಣ್ಣೀರು ಇಡುತ್ತಿದ್ದರು……ಅದನ್ನು ನೋಡಿ ನಾವೆಲ್ಲಿ ಮೌನಿಗಳಾದೆವು,ದಿವ್ಯ,ಅರ್ಷಿಯ,ಸುಜಯ್ ಕೂಡ ಅತ್ತರು ಆದರೆ ಕವಿತ ಅಳಲಿಲ್ಲ ಕಾರಣ ರಮೀಸ್ ಅಳುತ್ತಿದ್ದ ಕಾರಣವನ್ನು ಕವಿತಗೆ ಮೊದಲೇ ಹೇಳಿದರು…..ನಂತರ ನಾವೆಲ್ಲ ಪಕ್ಕದಲ್ಲಿದ್ದ ರೂಮಿಗೆ ಹೋದೆವು….ಅಲ್ಲಿ ಎಲ್ಲರು ಮೌನಿಗಳಗಿ ಕುಳಿತುಕೊಂಡೆವು….ಆಗ ರಮೀಸ್ ಅವರು ಏತಕ್ಕಗಿ ಅಳುತ್ತಿದ್ದರು ಎಂದು ನಮ್ಮೆಲ್ಲರಿಗು ಹೇಳಿದರು (ನಮ್ಮೆಲ್ಲರನ್ನು ಸಭಾಂಗನದ ಮೇಲೆ ನಿಲ್ಲಿಸಿದಾಗ ಎಲ್ಲಾರು ಕೊಟ್ಟ ಗೌರವವನ್ನು ಕಂಡು ಅವರಿಗೆ ಆನಂದವನ್ನು ತಾಳಲಾರದೆ ಅತ್ತರು). ಆಗಲು ಸಹ ಎಲ್ಲಾರು ಮೌನಿಗಳಾಗೆ ಇದ್ದರು..ಆಗಲೇ ರಮೀಸ್ ಅವರು ‘ಕಟ್ಟುತ್ತೆವ ನಾವು ಕಟ್ಟುತ್ತೆವ’ ಎಂಬ ಹಾಡನ್ನು ಹಾಡಿದರು ಹಾಗೆಯೇ ಆ ಹಾಡು ನಮ್ಮೆಲ್ಲರ ಬಾಯಿಗೆ ಹರಡಿತು….ನಂತರ ಒಬ್ಬೊಬ್ಬರು ಒಂದ್ದೊದು ಹಾಡುಗಳನ್ನು ಹಾಡಿದರು….ಹಾಗೆ ಹಾಡನ್ನು ಹಾಡಿ ಮುಗಿಸುವಷ್ತರಲ್ಲಿ ಸುಮಾರು 4:15 ಆಗಿತ್ತು.ನಾವು ಅಲ್ಲಿಂದ ಹೊರಡಲು ಪ್ರಾರಂಭಿಸಿದೆವು.ನಾವು ರೈಲ್ವೆ ನಿಲ್ಡಾನಕ್ಕೆ ಹೋದೆವು…ಸುಮಾರು 6 ಗಂಟೆಗೆ FSMK(amigo community center) ಅಲ್ಲಿ ಇದ್ದೆವು…ಆದರೆ ನಾವೆಲ್ಲ ರೈಲಿನಲ್ಲಿ ಬಂದೆವು ಆದರೆ ಜೀವ ಅವರು ಮಾತ್ರ ಸೈಕಲ್ ನಲ್ಲಿ ಬಂದರು , ಆದ ಕಾರಣ ಅವರು ಕಮ್ಯುನಿಟಿ ಸೆಂಟರ್ ಗೆ ಸ್ವಲ್ಪ ತಡವಾಗಿ ಬಂದರು. ಕಾರ್ತಿಕ್,ಅರವಿಂದ್ ಮನೆಗೆ ಹೋದರು…,,,ದಿವ್ಯ,ಅರ್ಷಿಯ,ಸುಜಯ್,ಕಿರಣ್,ಕವಿತ ಕಮ್ಯುನಿಟಿ ಸೆಂಟರಿನ ಹೊರಗಡೆನೇ ಕಾಯುತ್ತಿದ್ದರು..ನಂತರ ಅರವಿಂದ ಕಮ್ಯುನಿಟಿ ಸೆಂಟರಿಗೆ ಬಂದ..ಸುಮಾರು 6:50 ಗೆ ಬಂದರು.ನಂತರ ನಾವು ಅಮಿಗೊ ಕಮ್ಯುನಿಟಿ ಸೆಂಟರಿನ ಹೋಳಗೆ ಹೋಗಿ ಸ್ವಲ್ಪ ಹೋತ್ತು ಇದ್ದು ನಾವೆಲ್ಲಮನೆಗೆ ಹೋದೆವು…..

ಧನ್ಯವಾದಗಳು.
-ಅರವಿಂದ್