ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ ಒಂದು ನೊಂದಾಯಿತ ಲಾಭರಹಿತ ಸಂಸ್ಥೆ. ನಮ್ಮ ಪ್ರಾಥಮಿಕ ಉದ್ದೇಶವು ಸ್ವತಂತ್ರ ತಂತ್ರಾಂಶವನ್ನು ರಚಿಸಲು ಮತ್ತು ತಂತ್ರಾಂಶಗಳ ಅರಿವು ಮೂಡಿಸುವುದಾಗಿದೆ. ಇದು ಹಲವಾರು ಸ್ವಯಂಸೇವಕರು, ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಸೇರಿ ನಡೆಸುತ್ತಿರುವ ಸಂಸ್ಥೆಯಾಗಿದೆ.

ನಾವು ಪರಸ್ಪರವಾಗಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರಿಗೆ ಸ್ವತಂತ್ರ ತಂತ್ರಾಂಶವನ್ನು ಬಳಸಲು, ಅಭಿವೃದ್ಧಿಗೊಳಿಸಲು ಪ್ರೋತ್ಸಾಹಿಸುತ್ತೇವೆ.

ನಾವು ಪ್ರತಿ ಕಾಲೇಜು ಮಟ್ಟದಲ್ಲಿ ಗ್ನೂ ಲಿನಕ್ಸ್ ಬಳಕೆದಾರರ ಗುಂಪು (GLUG) ಸ್ತಾಪಿಸಿದ್ದೇವೆ.

ಈ ಗ್ಲಗ್ ಗಳಿಂದ ವಿವಿಧ ತಾಂತ್ರಿಕ ಅಧಿವೇಶನ ಹಾಗು ಕಾರ್ಯಕ್ರಮಗಳನ್ನು ಸಂಘಟಿಸುವುದು.