ಸ್ವತಂತ್ರ ತಂತ್ರಾಷ ಆಂದೋಲನ ಕರ್ನಾಟಕ, ಒಂದು ನೊಂದಾಯಿತ ,ಲಾಭಾಪೇಕ್ಷಿತವಲ್ಲದ ಸಂಘಟನೆಯಾಗಿದೆ. ಸಮಾಜದ ವಿವಿದ ಸ್ಥರಗಳಲ್ಲಿ ಸ್ವತಂತ್ರ ತಂತ್ರಾಷದ ಕುರಿತು ಅರಿವು ಮೂಡಿಸುವುದು ಮುಕ್ತ ತಂತ್ರಾಷ ಆಂದೋಲನ ಕರ್ನಾಟಕದ ಮೊದಲ ದ್ಯಯೋದ್ದೇಶವಾಗಿದೆ. ಸಾಫ್ಟವೇರ್ ಇಂಜಿನಿಯರ್, ವಿದ್ಯಾರ್ಥಿಗಳು,ಶಿಕ್ಷಣತಜ್ಞರು,ಸರ್ಕಾರಿ ನೌಕರರನ್ನೊಳಗೊಂಡ ಸ್ವಯಂ-ಸೇವಕರು ಸಂಘಟನೆಯ ಆಧಾರಸ್ಥಂಭವಾಗಿದ್ದಾರೆ.

ನಾವು ವಿಧ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಮುಕ್ತ ತಂತ್ರಾಂಷವನ್ನು ಬೆಳಸುವದು, ಬಳಸುವದು ಮತ್ತು ಬಳಸುವವರಿಗೆ ಸಹಾಯ ಮಾಡುವುದರೊಂದಿಗೆ ಸ್ವತಂತ್ರ ತಂತ್ರಾಂಷಕ್ಕೆ ಕೊಡುಗೆ ನೀಡುವಲ್ಲಿ ಮಾರ್ಗದರ್ಶನ ಮಾಡುತ್ತ ಬಂದಿದ್ದೇವೆ. ವಿಧ್ಯಾರ್ಥಿಗಳೊಂದಿಗೆ ಸತತ ಸಂಪರ್ಕದಲ್ಲಿರುವುದರ ಸಲುವಾಗಿ ಕಾಲೇಜುಮಟ್ಟದಲ್ಲಿ ಗ್ಲಗ್ (GLUG), ಎಂಬ ಹೆಸರಿನ ವಿದ್ಯಾರ್ಥಿಗಳ ಗುಂಪನ್ನು ರಚಿಸಲಾಗಿದೆ. ಈ ಗುಂಪುಗಳು ಕಾಲೇಜು ಮಟ್ಟದಲ್ಲಿ ಹಲವಾರು ತಾಂತ್ರಿಕ ವಿಷಯ ಮಂಡನೆಗಳು ಮತ್ತು ಕಾರ್ಯಗಾರಗಳನ್ನು ಏರ್ಪಡಿಸುತ್ತವೆ.

ಆದರೆ ಸ್ವತಂತ್ರ ತಂತ್ರಾಂಷ ಎಂದರೇನು…? ಸಂಕ್ಷಿಂಪ್ತವಾಗಿ ಹೇಳುವುದಾದರೆ ಸ್ವತಂತ್ರ ತಂತ್ರಾಂಷ, ಬಳಕೆದಾರರ ಸ್ವತಂತ್ರ್ಯವನ್ನು ಗೌರವಿಸುತ್ತದೆ. ಅಂದರೆ ತಂತ್ರಾಷದ ಪ್ರತಿ ಬಳಕೆದಾರನೂ ತಂತ್ರಾಷವನ್ನು ಬಳಸಲು, ಅದರಬಗ್ಗೆ ತಿಳಿದುಕೊಳ್ಳಲು, ಬೆರೆಯವರಿಗೆ ಹಂಚಲು, ಬೇಕಾದಂತೆ ಬದಲಾಯಿಸಿಕೊಳ್ಳಲು, ಬೇಕಾದಂತೆ ಉತ್ತಮಗೊಳಿಸಲು ಸ್ವತಂತ್ರ್ಯವಾಗಿರುತ್ತಾನೆ.

ಸ್ವತಂತ್ರ ತಂತ್ರಾಂಷಕ್ಕೆ ವಿರುದ್ದವಾದದ್ದು ಮಾಲೀಕತ್ವದ ಸಾಫ್ಟವೇರ್.ಇಲ್ಲಿ ಸ್ವತಂತ್ರ ತಂತ್ರಾಂಷದ ಉತ್ಪಾದಕರು ಬಳಕೆದಾರರಿಗೆ ನೀಡುವ ಸ್ವಾತಂತ್ಯವನ್ನು ನೀಡುವುದಿಲ್ಲ ಮತ್ತು ಮಾಲೀಕತ್ವದ ಸಾಫ್ಟವೇರ್ ಮಾಲಿಕರ ಅದೀನದಲ್ಲಿರುತ್ತದೆ.ಇಲ್ಲಿ ಮಾಲಿಕತ್ವದ ಸಾಫ್ಟವೇರ್ ಮಾಡುವ ಕೆಲಸವೇನು ಎಂಬುದನ್ನೂ ಬಳಕೆದಾರ ಪರಿಶೀಲಿಸಲಾಗುವುದಿಲ್ಲವಾದ್ದರಿಂದ, ಇಲ್ಲಿ ತಂತ್ರಾಷವನ್ನು ಬಳಕೆದಾರ ನಿಯಂತ್ರಿಸುವ ಬದಲು ತಂತ್ರಾಷವೇ ಬಳಕೆದಾರರನ್ನು ನಿಯಂತ್ರಿಸುವ ಪರಿಸ್ಥಿತಿ ಬಂದೊದಗುತ್ತದೆ. ಆದ್ದರಿಂದ ಮಾಲಿಕತ್ವದ ಸಾಫ್ಟವೇರ್ ಉತ್ಪಾದಕ ರಿಂದ ಹೆಣೆದ ಅನ್ಯಾಯವೆಸಗುವ ಸಲಕರಣೆಯಾಗಿದೆ.