ಸಮುದಾಯ ಕೇಂದ್ರ
ಇಂದು, ಮಾಹಿತಿ ಬೆರಳಂಚಿನಲ್ಲಿದೆ. ಆದರೆ ಇದರ ಅರಿವು ಕೇವಲ ಕಂಪ್ಯೂಟರ್ ಸಾಕ್ಷರತೆ ಇರುವವರಿಗೆ ಮಾತ್ರ. ಭಾರತದಲ್ಲಿ ನೂರು ಕೋಟಿ ಜನಸಂಖ್ಯಾ ವಿದ್ದರೂ, 8೦೦ ದಶಲಕ್ಷ ಜನರಿಗೆ ಅಂತರಜಾಲದ ಸೌಲಭ್ಯವಿಲ್ಲ. ಅಂತರಜಾಲದ ಸೌಲಭ್ಯವಿದ್ದರು ಅದರ ಅರಿವಿರುವ ಸಾಧ್ಯತೆಗಳು ಕಡಿಮೆ. ನಾವು ಕಂಪ್ಯೂಟರ್, ಅಂತರಜಾಲ ಮತ್ತು ಇನ್ನೇತರದ ಅಂತರವನ್ನು ಅತಿ ಕಡಿಮೆ ಮಾಡಲು ಪ್ರಯತ್ನಿಸುತ್ತಿದೇವೆ.
ಸಮುದಾಯ ಕೇಂದ್ರ ನಮ್ಮ ಒಂದು ನೇತೃತ್ವ. ಸ್ಥಳೀಯರ ಬೆಂಬಲದಲ್ಲಿ ಸಮುದಾಯ ಕೇಂದ್ರವು ಮುನ್ನೈಡೆಯುತ್ತಿದೆ -ಸ್ವಯಂ ಆಧಾರವಗಿರುವ ಘಟಕ. ಸ್ಥಳೀಯರಿಗೆ ಮತ್ತು ಮಕ್ಕಳಿಗೆ ಕಂಪ್ಯೂಟರ್, ಅಂತರಜಾಲವನ್ನು ಕಲಿಸುವುದು ಸಮುದಾಯ ಕೇಂದ್ರದ ಪ್ರಮುಖ ಉದ್ದೇಶ. ಶೈಕ್ಷಣಿಕ ವಿಷಯಗಳಲ್ಲಿ ಕೂಡ ಸಮುದಾಯ ಕೇಂದ್ರವು ಸಹಾಯ ಮಾಡುತ್ತಿದೆ.
ಬೆಂಗಳೂರಿನ ಹಲವು ಕಡೆ ಸಮುದಾಯ ಕೇಂದ್ರಗಳು ಇದೆ. ನಮ್ಮ ರಾಜ್ಯದೆಲ್ಲಡೆ ಸಮುದಾಯ ಕೇಂದ್ರಗಳನ್ನು ಶುರು ಮಾಡಲು ಇಚ್ಚಿಸುತ್ತೇವೆ.